Tuesday, December 15, 2009

ಕಾವ್ಯ ದೇವತೆ

ನೀನಿಲ್ಲದೆ ಎಲ್ಲಿಯ ಕವಿತೆ
ಬೆಳಕಿಲ್ಲದ ಹಣತೆ
ಬರಿದೆ ಜ೦ಜಾಟ ಪದಗಳ ಜೊತೆ
ಮಾತನಾಡಿದ೦ತೆ ಮೌನದ ಜೊತೆ
ಮರಳಲಾರೆಯ ಕಾವ್ಯದ ಹಿ೦ದಿನ ದೇವತೆ
ತು೦ಬಲಾರೆಯ ಮತ್ತೆ ಪದಗಳಿಗೆ ಜೀವದ ಒರತೆ

Friday, April 24, 2009

ಒಲವು

ಒಲವೆ೦ಬ ಮಾಯೆಯ ಮಡಿಲಲ್ಲಿ ಬಳಲಿದೆ ಜೀವ
ಮುದುಡಿ ಕುಳಿತಿದೆ ಮೂಕ ಮನಸ್ಸು ತಾಳಲರದೆ ಈ ನೋವ !!
ಆದರೀ ಬಳಲಿಕೆಯಲೂ ಬಲವಿದೆ
ನೋವಿನಲೂ ಅರಿಯದ ಹಿತವಿದೆ
ಬದುಕಿನ ಪಾಠ ಕಲಿಸಿದ ಒಲವಿಗೆ ನಾ ಋಣಿ
ನೋವಿನಲೇ ಸ್ಪೂರ್ತಿ ನೀಡಿದವಳಿಗೆ ಚಿರಋಣಿ !

Thursday, April 16, 2009

ನೆನಪು

ಮಾತಿಗಿ೦ತ ಮೌನ ಲೇಸು
ಮೌನಕಿ೦ತ ಧ್ಯಾನ ಲೇಸು
ಮೌನದಲ್ಲೂ, ಧ್ಯಾನದಲ್ಲೂ ನಿನ್ನ ನೆನಪೇ ಹಾಸುಹೊಕ್ಕು
ಕೊನೆಗೆ ನಿದ್ದೆ ಕೂಡ ಬರದೆ ಹೋಯ್ತು !!