Thursday, February 28, 2008

ಸೌ೦ದರ್ಯ

ಮೊದ ಮೊದಲು ನಿನ್ನ ನೋಡಿದಾಗ, ಅ೦ದುಕೊ೦ಡಿದ್ದೆ ನೀನಲ್ಲ ರೂಪವತಿ
ಕಾಲ ಕಳೆದ೦ದೆ ಅರಿವಾಗಿತ್ತೆನಗೆ, ನೀನು ಅನುಪಮ ಸೌ೦ದರ್ಯವತಿ

ಯಾವುದದು ನಿನ್ನ ಲಾವಣ್ಯ ಹೆಚ್ಚಿಸಿದ, ಸೌ೦ದರ್ಯವರ್ಧಕ
ನಿನ್ನನ್ನು ಆಕರ್ಷಣೆಯ ಕೇ೦ದ್ರವಾಗಿಸಿದ, ಆ ಸಾಧಕ

ಅದಲ್ಲವೇ ನಿನ್ನ ನಿಷ್ಕಲ್ಮಷ ಆ೦ತರ್ಯ, ಹ್ರುದಯವೈಶಾಲ್ಯ
ಸ್ವಾರ್ಥವಿಲ್ಲದೇ ಪ್ರೀತಿಸುವ ಅ೦ತರ೦ಗದ ಔದಾರ್ಯ

Thursday, February 21, 2008

ಭಾರ

ಭಾರ
===

ನಿಸರ್ಗದ ನಿಯಮ ತಾನೆ, ಹೊತ್ತಾಗ ಭಾರ ಕರಾಳ
ಇಳಿಸಿದಾಗ ಆಹಾ, ಹಗುರತೆಯ ನಿರಾಳ

ಆದರೇನಿದು ಪ್ರಿಯೆ, ನಿನ್ನ ಹೊತ್ತಾಗ ಹ್ರುದಯವಾಗಿತ್ತು ಎಷ್ಟೊ೦ದು ಹಗುರ
ನೀನು ದೂರಾದೊಡನೆ ತಾಳದಾದೀತು ಯಾತನೆಯ ಯಮ ಭಾರ!

Monday, February 18, 2008

ದಿನ??..ಅನುದಿನ

ನನ್ನ ಹ್ರುದಯ ಲಬ್ ಡಬ್ ಮರೆತು ಹಲವು ದಿನಗಳಾಯಿತು
ನಿನ್ನ ನಾಮ ಪಠಣದಲಿ, ಹಳೆಯ ರಾಗವ ಮರೆಯಿತು

ಕೇಳಿದೆನು, ಮತ್ತೆ ಮರಳಲಾರೆಯ ಲಬ್ ಡಬ್ ತಾಳಕೆ
ಅವಳು ಕುಣಿಯಲಾರಳು ನಿನ್ನ ಮೇಳಕೆ

ಅದೆ೦ದಿತು, ಆರ೦ಭಿಸಲಾರೆ ಹಳೆಯ ರಾಗವ
ಬದಲಿಗೆ ನಿಲ್ಲಿಸಿಯೇನು, ನನ್ನ ಬಡಿತವ

ಇ೦ತ ನಮ್ಮ ಅನುಬ೦ಧಕೆ, ಸಾಕೆ ನಮಗೆ ಒ೦ದು ದಿನ
ಅನಿಸದೆ ನಿನಗೆ, ಸಾಲದೆಮಗೆ ಅನುದಿನ

ಯಾಕೆ ನಮಗೆ ಪ್ರೇಮಿಗಳ ದಿನದ ಚಿ೦ತೆ
ಪ್ರತಿ ದಿನ, ಪ್ರತಿ ಕ್ಶಣ ನಮ್ಮದೆಯ೦ತೆ